ಮತ್ತೊಮ್ಮೆ ಮಹಾ ಚುನಾವಣೆ ಬಂದಿದೆ.ಈ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿನ ಮತಗಟ್ಟೆಗಳ ಸಂಖ್ಯೆ ೧೫೧೮.ಅಂದ್ರೆ ಕಳೆದ ೨೦೦೮ರಲ್ಲಿನ ಚುನಾವಣೆಗಿಂತ ೧೦೬ ಮತಗಟ್ಟೆ ಈ ಬಾರಿ ಹೆಚ್ಚಾಗಿವೆ.೨೦೦ ಮತಗಟ್ಟೆಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದೆ.ವಿಡಿಯೊ ಕ್ಯಾಮರಾ ಅಳವಡಿಕೆ ಮಾಡಿ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದು ಕೊಳ್ಳಲಾಗಿದ್ದು,ಇದರಿಂದ ಅಪರಾಧಿಗಳ ಬಂಧನ ಸುಲಭ ಸಾಧ್ಯವಾಗಲಿದೆ.ದೂರವಾಣಿ ಸಂಪರ್ಕ ಇಲ್ಲದ ಸುಮಾರು ೧೫೦ ಕೇಂದ್ರಗಳಲ್ಲಿ ವಿಲ್ ಫೋನ್ ಅಳವಡಿಸಲಾಗುವುದು ಎಂದು ದ.ಕನ್ನಡ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನೀಯ ಸಹಾಯಕ ಪ್ರಭಾಕರಶರ್ಮಾ ಮಾಹಿತಿ ನೀಡಿದ್ದಾರೆ..
ಇಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಅಧಿಕ.
ಮಹಿಳಾ ಮತದಾರರು ೬೭೫೦೦೨ ಇದ್ದರೆ,ಪುರುಷ ಮತದಾರರು ೬೫೮೧೭೪ ಇದ್ದಾರೆ.
ಇದು ಈ ಬಾರಿಯ ಚುನಾವಣೆಯ ಸ್ಟ್ಯಾಟಿಸ್ಟಿಕ್ಸ್..
ವಿಟ್ಲ ಸುತ್ತ ಮುತ್ತಲಿನ ಪ್ರದೇಶ ಮಂಗಳೂರು ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ.
ಅಂದ ಹಾಗೆ ಇಂದು ವಿಟ್ಲ ಅರಮನೆ ರಸ್ತೆಯ ಕೆ.ಜೆ.ವಾಣಿಜ್ಯ ಸಂಕೀರ್ಣದಲ್ಲಿ ಬಿ.ಜೆ.ಪಿ ಚುನಾವಣಾ ಕಛೇರಿ ಉದ್ಘಾಟನೆಯಾಯಿತು..ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು,ಸ್ಥಳೀಯ ನಾಯಕರು ಭಾಗವಹಿಸಿದ್ದರು...ನಳಿನ್ ಕುಮಾರ್ ಕಟೀಲ್ ಬಹುತೇಕ ಖಚಿತ ಅಭ್ಯರ್ಥಿ.
ಅದೇ ಸಮಯ ಕಾಂಗ್ರೆಸ್ ತನ್ನ ಅಭ್ಯರ್ಥಿ ಸಾಲಮೇಳದ ಜನಾರ್ಧನ ಪೂಜಾರಿಯವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಕದನಕ್ಕೆ ತೊಡೆ ತಟ್ಟಿ ನಿಂತಿದೆ.ಜನತಾದಳ ಸಿಪಿಎಂ ನ ಮಾಧವರಿಗೆ ಬೆಂಬಲ ನೀಡುತ್ತಿದೆ.
ಚುನಾವಣೆ ತನಕ ಮನೆಮುಂದೆ ಬಂದು ಹಲ್ಲುಗಿಂಜೋರು ಚುನಾವಣೆ ಬಳಿಕ ಸಿಗೋದೇ ಕಷ್ಟ!ನೀರು ಇಲ್ಲ,ಕರೆಂಟಿಲ್ಲಾ ಅಂತ ನಿಮ್ಮ ಸಮಸ್ಯೆ ಬಿಚ್ಚಿದ್ರೆ ವೀರಭದ್ರಾವತಾರ ತಾಳುತ್ತಿದ್ದ ಮುಖಂಡರೆಲ್ಲಾ ಶಾಂತ ಚಿತ್ತರಾಗಿ,ಪ್ರಸನ್ನವದನರಾಗಿ ಮನೆ-ಮನೆಗೆಬರುತ್ತಿದ್ದಾರೆ.
ಬಡಪಾಯಿ ಮತದಾರ ಮಾತ್ರ..ಈ ಬಾರಿಯೂ ಕಕ್ಕಾಬಿಕ್ಕೀ...!
ವಿಟ್ಲಕ್ಕೊಂದು ಸರಕಾರೀ ಹೈಸ್ಕೂಲು,ಸರಕಾರಿ ಪದವಿ ಪೂರ್ವ ಕಾಲೇಜು,ವಾಕಿಂಗ್ ಟ್ರ್ಯಾಕ್ಇರೋ ಒಂದು ಉದ್ಯಾನವನ,ಸುಸಜ್ಜಿತ ಈಜು ಕೊಳ ,ಪ್ರತಿ ಮನೆಗೂ ನೀರು ಸರಬರಾಜು ಇಂತಹ ಜನಪರ ಕೆಲಸಗಳನ್ನು ತನ್ನ ಮುಂದಿನ 5ವರ್ಷ ಅವಧಿಯಲ್ಲಿ ಮಾಡಬಲ್ಲಾ "ಹೄದಯವಂತ" ನಿಗಾಗಿರಲಿ ಮತದಾರರ ಮತ.
ಅದೆಲ್ಲಾ ಇರ್ಲಿ.....ಕೊನೆಗೆ ನಿಮ್ಮ ತಲೆ ಮ್ಯಾಲೆ ಕಷ್ಟ ಬಂದ್ರೆ ನಿಮ್ಮ ಕೈನೇ...!ಮತ್ಯಾರದ್ದೂ ಅಲ್ಲಾ....ಅಂತ ಹೇಳ್ತಾ ಈ ಬಾರಿ ಚುನಾವಣೆಯ ಅಧಿಕೄತ(ಹಾಗಿದ್ರೆ..ಅನಧಿಕೄತ ಇದ್ಯಾ ಅಂತ ಕೇಳಬಾರ್ದು!)..ವೆಚ್ಚ.. ೧೦,೦೦೦ ಕೋಟಿಯಂತೆ... ಬರೋಬ್ಬರಿ
ಇದರಲ್ಲಿ ಚುನಾವಣಾಆಯೋಗ-೧೩೦೦ಕೋಟಿ
ಕೇಂದ್ರ-ರಾಜ್ಯಸರಕಾರ-೭೦೦ಕೋಟಿ
ಬಿ.ಜೆ.ಪಿ.ಪಕ್ಷ-೧೦೦೦ಕೋಟಿ
ಕಾಂಗ್ರೆಸ್ ಪಾರ್ಟಿ-೧೦೦೦ಕೋಟಿ
ಸ್ಥಳೀಯ ಪಕ್ಷಗಳು-೧೦೦೦ಕೋಟಿ
ಅಭ್ಯರ್ಥಿಗಳು-೫೦೦೦ಕೋಟಿ ಅಂದ್ರೆ ಒಟ್ಟು-೧೦೦೦೦ಕೋಟಿ ರೂಪಾಯಿಯಂತೆ.....ನಿಯಮ ಪ್ರಕಾರ ಒಬ್ಬ ಅಭ್ಯರ್ಥಿ ೨೫ ಲಕ್ಷಕ್ಕಿಂತ ಹೆಚ್ಚು ಬಳಸುವಂತಿಲ್ಲ.
ಹ್ಯಾಗಿದೆ ಚುನಾವಣಾ ವೆಚ್ಚಾ?
ಝಣ...ಝಣ...ಕಾಂಚಣದಲ್ಲಿ...