Showing posts with label ಪಂಚಲಿಂಗೇಶ್ವರ ದೇಗುಲಕ್ಕೆ ಹೊಸ ಕೊಡಿ ಮರ. Show all posts
Showing posts with label ಪಂಚಲಿಂಗೇಶ್ವರ ದೇಗುಲಕ್ಕೆ ಹೊಸ ಕೊಡಿ ಮರ. Show all posts

Friday, February 13, 2009

ಕೊಡಿ ಮರ - ತೈಲವಿಧಿ


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೊಡಿ ಮರ -ಧ್ವಜ ಸ್ಥಂಭದ ಕೆತ್ತನೆಯ ಕೆಲಸ ಮುಗಿದು ತೈಲ ಹೊಯ್ಯುವ ಕಾರ್ಯಕ್ಕೆ ಜನವರಿ೧೩-೨೦೦೯ರಂದು ಚಾಲನೆ ಕೊಡಲಾಯಿತು.ಸುಮಾರು ೬೦೦೦ಲೀ. ಶುದ್ಧ ಎಳ್ಳೆಣ್ಣೆ ಹಿಡಿಯುವ ಟ್ಯಾಂಕಿಯಲ್ಲಿ ಕೊಡಿ ಮರವನ್ನು ಹಾಕಿದ ನಂತರ ಸೇರಿದ ಜನರೆಲ್ಲ ಭಕ್ತಿಯಿಂದ ತೈಲ ಅರ್ಪಿಸಿದರು.ಸುಮಾರು ೬೭ ಅಡಿ ಎತ್ತರದ ಕೊಡಿ ಮರಕ್ಕೆ ಅದೇ ಗಾತ್ರದ ಟ್ಯಾಂಕನ್ನೂ ದೇಗುಲದ ಒಳಭಾಗದಲ್ಲಿ ರಚಿಸಲಾಗಿದೆ.ಇನ್ನು ಸುಮಾರು ೩ ತಿಂಗಳ ತನಕ ಈ ರೀತಿಯಲ್ಲಿ ಕೊಡಿ ಮರವನ್ನು ಎಣ್ಣೆಯಲ್ಲಿಡಲಾಗುವುದು.ಕೊಡಿ ಮರದ ದೀರ್ಘಕಾಲೀನ ಬಾಳ್ವಿಕೆಗಾಗಿ ಈ ಪಾರಂಪರಿಕ ಕ್ರಮವನ್ನು ಅನುಸರಿಸಲಾಗುತ್ತದೆ