Sunday, March 22, 2009

ದೇವರಿಗೂ ಕಳ್ಳರ ಕಾಟ!

ಎಲ್ಲರ ಕಾಯುವ ದೇವರಿಗೂ ಇದೀಗ ಕಳ್ಳರ ಕಾಟ!ಕಳ್ಳರ ಹುಡುಕಾಟದಲ್ಲಿ ವಿಟ್ಲ ಪೋಲಿಸ್.
ಇಲ್ಲೇ ಸಮೀಪದ ಕೆಲಿಂಜ ಉಳ್ಳಾಲ್ತಿ ದೈವಸ್ಥಾನದಲ್ಲೀ ಶುಕ್ರವಾರ ೨೦ಮಾರ್ಚ್೨೦೦೯ ರ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ.ದೈವಸ್ಥಾನಕ್ಕೆ ಹೊಕ್ಕು ನಗ-ಆಭರಣಗಳಿಗೆ ಹುಡುಕಿ ಏನೂ ಸಿಗದೆ ಪ್ರಾಕಾರದ ಇತರ ಪರಿವಾರ ಗುಡಿಗಳಲ್ಲು ಆಭರಣಗಳಿಗಾಗಿ ಹುಡುಕಾಡಿದ ಕುರುಹು ಕಂಡು ಬಂದಿದೆ.
ಶನಿವಾರ ಬೆಳಿಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ. ಶ್ವಾನದಳ,ಬೆರಳಚ್ಚು ತಜ್ನರ ಸಹಾಯ ಪಡೆದ ವಿಟ್ಲ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.ಕಳೆದ 3 ತಿಂಗಳ ಹಿಂದೆಯಷ್ಟೇ ಬ್ರಹ್ಮಕಲಶೋತ್ಸವ ವಿಜೄಂಭಣೆಯಿಂದ ಜರುಗಿ ಒಂದು ವಾರದಲ್ಲೇ ದೈವಸ್ಥಾನದ ಕಚೇರಿಗೆ ಕಳ್ಳರು ನುಗ್ಗಿದ್ದರು..ಇದು ಎರಡನೇ ಬಾರಿ ಕಳ್ಳತನ ಪ್ರಯತ್ನವಾಗಿದೆ.
ಇದೇ ಸಮಯ ಮಾಮೇಶ್ವರ ಸನಿಹದ ಮಾಡ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.

2 comments:

  1. This comment has been removed by the author.

    ReplyDelete
  2. THANK YOU FOR YOUR KIND SUGGESTION..I WILL TRY TO SEE ITS FEASIBILTY

    ReplyDelete