Monday, November 29, 2010

ಶನೈಶ್ವರ ಪೂಜೆ-VITLA



ವಿಟ್ಲ ಪಂಚಲಿಂಗೇಶ್ವರದೇವಸ್ಥಾನ ದಲ್ಲಿ ದಿ.೨೮.೧೧.೨೦೧೦ ರ್ ಶನಿವಾರ ಸಂಜೆ ಶನೈಶ್ವರ ಪೂಜೆ.ಸುಮಾರು ೪.೦೦ ಘಂಟೆಯಿಂದ ೭ರ ತನಕ ಸ್ವಲ್ಪ ಮಟ್ಟಿಗೆ ಅಪರೂಪ ಅನ್ನಿಸುವಂತಹ ವಾತಾವರಣ.
೨೦೦ರ ಆಸುಪಾಸು ಜನ ಪೂಜಾ ಕಾರ್ಯದಲ್ಲಿ ತೊಡಗಿದ್ದರೆ,ಒಂದಷ್ಟು ಜನ ವೀಕ್ಷಿಸಲು ಸೇರಿದ್ದರು.
ಶ್ರೀ ಸುಬ್ರಹ್ಮಣ್ಯ ಬಡೆಕಿಲ್ಲಾಯರ ಕಥಾಪ್ರವಚನ,ಕೄಷ್ಣ ಕೇಕುಣ್ಣಾಯ ಮತ್ತು ಸತ್ಯನಾರಯಣ ಬಳ್ಳಕ್ಕುರಾಯರ ನೇತೄತ್ವದಲ್ಲಿ ಧಾರ್ಮಿಕ ಕ್ರಿಯೆಗಳು ಜರಗಿದವು..
ಗಜ ಆಯದ ನಿರ್ಮಾಣ ಹಂತದಲ್ಲಿನ ದೇಗುಲದ ಸುತ್ತ ದೀಪ ಹಿಡಿದು ಪೂಜಾಕರ್ತರ ಸಾಗಿದ ದೄಶ್ಯ ಮನಮೋಹಕವಾಗಿತ್ತು.
ವಿಟ್ಲ ಸೀಮೆಯ ಅರಸರಾದ ಶ್ರೀ ಜನಾರ್ಧನ ವರ್ಮ ಅರಸರು, ಕೄಷ್ಣಯ್ಯ ಉಪಸ್ಥಿತರಿದ್ದರು.

Friday, November 26, 2010

ಬರಲಿದೆ "ಪ್ರಮೀಳಾರಾಜ್ಯಭಾರ"

ಮತ್ತೆ ಚುನಾವಣೆ ಭರಾಟೆ...
ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆ ಭರಾಟೆ.
ಪಕ್ಷಗಳಲ್ಲಿ ಹಗರಣಗಳ ಮೇಲಾಟದ ಬಳಿಕ ಅಭ್ಯ್ರರ್ಥಿಗಳ ಆಯ್ಕೆಯ ಕಸರತ್ತು.
ಕಳೆದ ಬಾರಿ ಜಿ.ಪಂಚಾಯತ್ ಗೆ ಉಪಾಧ್ಯಕ್ಷರನ್ನು ಕೊಟ್ಟ ವಿಟ್ಲ ಭಾ.ಜ.ಪಕ್ಕೆ ಸ್ಥಾನವುಳಿಸುವ ತವಕ. ಎರಡು ತಾಲೂಕು ಪಂಚಾಯತು ಸ್ಥಾನಕ್ಕೆ ಮರ್ಯಾದೆ ಹೋದೀತೆ?ಎಂಬ ಅಂಜಿಕೆ.
ಹೊಸ ಬ್ಲಾಕ್ ಅಧ್ಯಕ್ಷರ ಆಯ್ಕೆಯಿಂದ ಯುವಕರ ಬಲ ಮತ್ತು ಕಳೆದ ಬಾರಿಯ ಜಿ.ಪಂ.,ತಾ.ಪಂ.,ಸದಸ್ಯರ ಅಧಿಕಾರಾವಧಿಯ "ಸಾಧನೆ"ಗಳನ್ನೇ ಬಂಡವಾಳವಾಗಿಸಿ ಚುನಾವಣೆ ಎದುರಿಸ ಹೊರಟ ಇಂದಿರಮ್ಮನ ಪಕ್ಷ!
ಇವೆಲ್ಲದರ ನಡುವೆ ಗಾದಿಯಾಸೆಯಿಂದ ಕೂತವರಿಗೆ ಈ ಸಾರಿಯ ಮೀಸಲಾತಿ ತಣ್ಣೀರೆರಚಿದ್ದರೆ-"ಮಹಿಳೆಯರಿಗೆ"ಹರುಷದ ನಗು ತಂದಿದೆ. ಇಲ್ಲಿನ 3 ಸ್ಥಾನಗಳು ಮಹಿಳೆಯರಿಗೆ ಒಲಿದಿದೆ.
ಪಕ್ಷಗಳಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ.ಬಿ.ಜೆ.ಪಿಗೆ ಮಾನವುಳಿಸಿಕೊಳ್ಳುವ ಚಿಂತೆ-ಕಾಂಗ್ರೆಸ್ಸಿಗೆ ಕಳೆದ ಚುನಾವಣೆನಲ್ಲಿ ಹೋದ ಮಾನ ಪಡೆಯುವ ಆಕಾಂಕ್ಷೆ...
ಯಾರೂ ಗೆದ್ದರೂ,ಯಾರು ಸೋತರೂ ಈ ಬಾರಿ ವಿಟ್ಲದಲ್ಲಿ ಪ್ರಮೀಳೆಯರ ರಾಜ್ಯಭಾರ.

Monday, November 22, 2010

ವಿಟ್ಲ ರಸ್ತೆ - "ಗುಂಡಾ-ಗುಂಡಿ"



ಮಳೆಗಾಲದ ಆರಂಭಕ್ಕೇ ಕೆಟ್ಟು ಕೆರಹಿಡಿದಿದ್ದ ವಿಟ್ಲ ಪೇಟೆಯ ರಸ್ತೆಹರಿದು ಚಿಂದಿಯಾಗಿವೆ.ಪುತ್ತೂರು ರಸ್ತೆಯಲ್ಲಿನ ಬಸ್ ಸ್ಟ್ಯಾಂಡ್ ಬಳಿ ಸಣ್ಣಕೆರೆಯೇ ರಸ್ತೆ ಮಧ್ಯದಲ್ಲಿ..ಸುರಿವ ಮಳೆಗೆ ರಸ್ತೆಗಳೆಲ್ಲಾ ಹೊಳೆಯಾಗುತ್ತದೆ.
ಇವೆಲ್ಲದರ ಜೊತೆ ನಾಲ್ಕು ಮಾರ್ಗ ಸೇರುವಲ್ಲೆ ಮಂಗಳೂರು ರಸ್ತೆ ಬಾಯ್ಬಿಟ್ಟಿದೆ.ದಿನಕ್ಕೊಂದರಂತೆ ವಾಹನಗಳು ಈ ಕೂಪಕ್ಕೆ ಬೀಳುತ್ತಿವೆ..ಮೊನ್ನೆ ಕಾರು,ನಿನ್ನೆ ಟಿಪ್ಪರ್ ಲಾರಿ -ದಬಕ್ ದಬಕ್ ಐಸಾ ಎಂದು ನೂಕಿದರೂ ಜಗ್ಗದ ಲಾರಿಯನ್ನು ಬೇರೊಂದು ಲಾರಿಯಲ್ಲಿ ಎಳೆದು ಮೇಲೆ ತರುವಲ್ಲಿ ಗೆ ಮುಕ್ಕಾಲು ಘಂಟೆ ರೋಡ್ ಬ್ಲಾಕ್.

Monday, November 1, 2010

ರೀ-ಎಂಟ್ರಿ

ಸುಧೀರ್ಘ ವಿರಾಮದ ನಂತರ ಭರಪೂರದ ಮಳೆಗಾಲದ ನಡುವೆ ಮತ್ತೆ ವಿಟ್ಲ ಸುತ್ತಮುತ್ತಲಿನ ಸುದ್ದಿಗಳನ್ನು ಹೆಕ್ಕಿ ತರುವ ತವಕ.
ಬದಲಾವಣೆಯ ಬಿರುಸಿಗೆ ಒಡ್ಡಿಕೊಳ್ಳುತ್ತಿರುವ ನನ್ನೂರು-ಈ ಭಾಗದ ಜನತೆ.
ಬದಲಾಗುತ್ತಿರುವ ರಾಜಕೀಯ ತಂತ್ರ-ಸಮೀಕರಣ.ಹೊತ್ತು ತಿರುಗಿದವರನ್ನೇ ಮೆಟ್ಟಿ ಮೆರೆಯಲು ವೇದಿಕೆಯಾಗುತ್ತಿರುವ ಜಿಲ್ಲಾಪಂಚಾಯತು,ತಾಲೂಕು ಪಂಚಾಯತುಗಾದಿಯ ಆಸೆ.ಇವೆಲ್ಲದರ ನಡುವೆ ನಿತ್ಯ ಅಧಿ ನಾಯಕರೆಂದು ಬೀಗುತ್ತಿರುವ ನೇತಾರರನ್ನು ನಿತ್ಯ ತರಾಟೆಗೆ ತೆಗೆದು ಕೊಳ್ಳುತ್ತಿರುವ ಮಾಧ್ಯಮದ ಮಂದಿ.
ಇವೆಲ್ಲದರ ನಡುವೆ ವಿಟ್ಲದ ಕೆಲ ಹಸಿ- ಬಿಸಿ ಸುದ್ದಿನಿಮಗಾಗಿ .