Sunday, March 29, 2009

ಮಂಗಳೂರು ಚುನಾವಣೆ ಮತ್ತು ರಾಮ"ಲೀಲಾ"

ನಮ್ಮಲ್ಲಿ ಈ ಬಾರಿ ಚುನಾವಣೆಯ ಕಾವು ಏರುತ್ತಿರುವಂತೆ ವಾತಾವರಣ ತಂಪು ಮಾಡಲು ಅಲ್ಲಲ್ಲಿ ಮಳೆ ಸುರಿಯಲಾರಂಭಿಸಿದೆ.
ಕಾಂಗ್ರೆಸ್ನಲ್ಲಿ ಜನಾರ್ಧನ ಪೂಜಾರಿ,ಬಿ.ಜೆ.ಪಿನಲ್ಲಿನ ನಳಿನ್ ಕುಮಾರ್ ,ಸಿ.ಪಿ.ಎಂ ನ ಮಾಧವ ಚುನಾವಣ ಕಣದಲ್ಲಿನ ರಾಷ್ಟ್ರೀಯಪಕ್ಷದ ಅಭ್ಯರ್ಥಿಗಳು.ಇವರೆಲ್ಲರ ಜೊತೆಗೆ ಪುತ್ತೂರಿನ ರಾಮಭಟ್ಟ್ ಕೂಡ ಸ್ವಾಭಿಮಾನಿ ವೇದಿಕೆ ಮೂಲಕ ಸ್ಪರ್ಧಿಸುತ್ತಿದ್ದಾರೆ.ಒಂದೊಮ್ಮೆ ಬಿ.ಜೆ.ಪಿ ಶಾಸಕನಾಗಿ ರಾಷ್ಟ್ರ ನಾಯಕರ ಸಂಪರ್ಕದಲ್ಲಿದ್ದ ಹಿರಿಯ ನಾಯಕನ ಕೆರಳಿದ "ಸ್ವಾಭಿಮಾನ"ಕ್ಕೆ ಕಳೆದ ವಿಧಾನಸಭ ಚುನಾವಣೆಯಲ್ಲಿ ಅನೀರೀಕ್ಷಿತ ಬೆಂಬಲ ಗಳಿಸಿತ್ತು.೧೦,೦೦೦ಕ್ಕಿಂತ ಹೆಚ್ಚು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು.ಈ ಬಾರಿಯೂ ರಾಮ(ಭಟ್ಟ್) ಕಾಟವಿದ್ದು..ಬಿ.ಜೆ.ಪಿ ಈಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದೆ.
ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಬಳಸುವ ಕಲೆ ಬಲ್ಲ ಈ ಹಿರಿಯ ನಾಯಕ ಜನಸಂಘ ಕಟ್ಟುವ ಮಾತಾಡುತ್ತ, ಮತ್ತೆ ಜನಸಂಘದ ಹೆಸರಲ್ಲಿ ಸ್ಪರ್ಧಿಸಿ ಓಟುಗಿಟ್ಟಿಸುವ,ಬಿ.ಜೆ.ಪಿಯಲ್ಲಿನ ಅತೄಪ್ತರನ್ನು ಸೆಳೆಯುವತ್ತ ಗಮನ ನೀಡಿದ್ದಾರೆ.ಮಂಗಳೂರು ಲೋಕಸಭ ಕ್ಷೇತ್ರದ ಈಎಲ್ಲಾ ತಿರುವುಗಳು ಮಾಧ್ಯಮ ಮಂದಿಯನ್ನು ಆಕರ್ಷಿಸುತ್ತಿದ್ದು ಟಿ.ವಿ 9 ವಾರ್ತ ವಾಹಿನಿ ರಾಮಭಟ್ ಜೊತೆಗಿನ ಚಕ್ರವ್ಯೂಹ ಕಾರ್ಯಕ್ರಮ ಪ್ರಸಾರ ಮಾಡಿತ್ತು .
ರಾಜಿ ಸಂಧಾನ....ಮಾತುಕತೆ ಮುಗಿದು-ಮುರಿದ ಮೇಲೆ ಈಗ ರಾಮಭಟ್ಟ್ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಮುಂದೆ ಏನಾಗುತ್ತದೋ ಮತದಾರ ಪ್ರಭುವೇ ಬಲ್ಲ!