ವಿಭೂತಿ ಬಾಬಗಳಿಂದ,ಭವಿಷ್ಯ ಹೇಳೋವರಿಂದ,ಅದ್ಯಾರೋ ಭಿಕ್ಷುಕರಿಂದ ಜನ ಮೋಸಹೋಗೋ ಪ್ರಕರಣಗಳೆಷ್ಟೋ ವರದಿಯಾಗುತ್ತಿದ್ದರು ವಂಚಕರಿಂದ ಮೋಸ ಹೋಗೋ ಜನಕ್ಕೇನೂ ಕಮ್ಮಿ ಇಲ್ಲ.ವಿಟ್ಲದಲ್ಲೂ ಈ ರೀತಿ ನಡೆಯೋದಿದೆ.
ಮೊನ್ನೆ ಆದಿತ್ಯವಾರ ಬೆಳಿಗ್ಗೆ ಮಿತ್ರರೊಬ್ಬರ ಮೊಬೈಲ್ ಕರೆ!ವೄದ್ಧೆ ಒಬ್ಬರು ಮೋಸಕ್ಕೊಳಗಾಗಿದ್ದಾರೆ,ಆಕೆಯ ಚಿನ್ನದ ಸರ ಅಪಹರಿಸಲಾಗಿದೆ ಎಂಬ ಸಿಕ್ಕ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದೆ.ಆ ಬಳಿಕವೇ ....ಆ ಮುಗ್ಧ ಅಜ್ಜಿ ಅಪರಚಿತನೋರ್ವನಿಂದ ಮೋಸ ಹೋದ ರೀತಿ ಗೊತ್ತಾಗಿದ್ದು....!
ದಿನ ಬೆಳಗಾದರೆ ಗಿಜಿಗುಟ್ಟುವ ವಿಟ್ಲ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಗೆ ಕಾಯುತ್ತಿದ್ದ ವೄದ್ಧೆಯಲ್ಲಿ ಮಾತಾಡಿ, ಬಳಿಯ "ಉಪಾಹಾರ"ವೆಂಬ ಹೋಟೆಲಿಗೆ ಕರೆದುಕೊಂಡು ಹೋಗಿ ,ನಂತರ ಆಕೆಯ ಕೊರಳಲ್ಲಿನ ಚಿನ್ನದ ಸರವನ್ನು ಪ್ಯಾಟರ್ನ್ ತೋರಿಸಿ ತರುತ್ತೇನೆ...ನನಗೆ ಹೊಸ ಸರ ಮಾಡಿಸಲಿಕ್ಕಿದೆ...ಎಂದು ಹೇಳಿ ೨ ನಕಲಿ ಬಳೆಗಳನ್ನು ಚಿನ್ನದ್ದೆಂದು ಹೇಳಿ ನಂಬಿಸಿ ಕೈಗೆ ತುರುಕಿ ಹೋದ ಅಸಾಮಿಯನ್ನು ಹೆಂಗಸು ಕಾದದ್ದೇ ಬಂತು!
ಹೋಟೆಲಿನಲ್ಲಿ ಸುಮಾರು ಹೊತ್ತು ಕಳೆದ ಮೇಲೆ ಅಜ್ಜಿಯೇ ಈ ಸಂಗತಿಯನ್ನು ಬಾಯ್ಬಿಟ್ಟಾಗ ಅಲ್ಲಿದ್ದವರೆಲ್ಲ ಸೇರಿ ಸರ ಎಗರಿಸದವನ ಹುಡುಕೊ ಪ್ರಯತ್ನ ಮಾಡಿದರೂ ಫಲ ಶೂನ್ಯ.
ಮಿಕವನ್ನೆತ್ತಿದ ಗಿಡುಗ ಹಾರಿ ಹೋಗಿತ್ತು..
ಈ ವಿಷ್ಯ ಎಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಬಂದಿತ್ತು...ಆದರೂ ಮತ್ತೆ ಒಂದು ವಾರದ ಬಳಿಕ ಬಿ.ಸಿ. ರೋಡ್ ನಲ್ಲಿ ಇಂತದೇ ಒಂದು ಸರ ಅಪಹರಣ ಪ್ರಕರಣ ವರದಿಯಾಗಿತ್ತು!
ಮತ್ತಿನ್ಯಾವಾಗ ಜನ ಬುದ್ಧಿ ಕಲಿಯೋದಾ...?
Friday, March 20, 2009
Subscribe to:
Posts (Atom)
