Saturday, December 11, 2010

ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ ಆಚರಣೆ ವಿಟ್ಲದಲ್ಲಿ ವಿಜೄಂಭಣೆಯಿಂದ ನಡೆಯುತ್ತದೆ.ಅನಂತೇಶ್ವರ ದೇಗುಲದಲ್ಲಿ ವಾರ್ಷಿಕ ಆಚರಣೆಗಳೊಂದಿಗೆ ನಡೆಯುವ ಷಷ್ಠಿಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.ಚಿತ್ರಾಪುರ ಸಾರಸ್ವತರು ಆರಾಧಿಸುವ ಈ ದೇವಸ್ಥಾನ ಶಿರಾಲಿ ಚಿತ್ರಾಪುರ ಮಠದ ಆಳ್ವಿಕೆಯಲ್ಲಿದೆ. ಪಂಚಮಿ ದಿನ ದೇವರ ಮೄಗಬೇಟೆ ಉತ್ಸವ ಜೋರಾಗಿ ನಡೆಯುತ್ತದೆ. ವಿಟ್ಲ ಸನಿಹದ ಕೇಪು ಸುಬ್ರಾಯದೇಗುಲ,ನೆಕ್ಕಿತ್ತಪುಣಿ,ಕಾಟುಕುಕ್ಕೆ,ಕೆಮ್ಮಿಂಜೆ ದೇವಸ್ಥಾನಗಳಲ್ಲೂ ಷಷ್ಠಿ ಆಚರಣೆಯಿದೆ.

ಧರ್ಮಸ್ಥಳ ಲಕ್ಷದೀಪೋತ್ಸವ

ವಿಟ್ಲದಿಂದ ಸರಿ ಸುಮಾರು ೭೦ಕಿ.ಮೀ.ದೂರದಲ್ಲಿನ ಕ್ಷೇತ್ರ ಧರ್ಮಸ್ಥಳ.ವರ್ಷಕ್ಕೊಮ್ಮೆ ನಡೆಯುವ ಲಕ್ಷದೀಪೋತ್ಸವ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲದೇ ಇರುವುದೂ ನಿಜಕ್ಕೂ ಹೆಚ್ಚುಗಾರಿಕೆ.೫-೧೨-೨೦೧೦ರ ಉತ್ಸವದಲ್ಲಿ ರೋನು ಮುಜುಮ್ದಾರ್ ಮತ್ತು ಮುಂಬೈ ಜಯಶ್ರಿಯವರ ಜುಗಲ್ಬಂದಿ ಕಾರ್ಯಕ್ರಮವಿತ್ತು.ಸಾಹಿತ್ಯ -ಸರ್ವಧರ್ಮ ಸಮ್ಮೇಳನವೂ ನಡೆಯಿತು ಇದೇ ಸಂದರ್ಭದಲ್ಲಿ.ಕಲಾತಂಡಗಳು,ಸಂಗೀತ-ನೄತ್ಯ ಗಾಯನಸಂಜೆಗಳು ಮುದಗೊಳಿಸಿತು.

Thursday, December 9, 2010

ವಿಟ್ಲ-ಜೀತ ಪ್ರಕರಣ

ಸುದ್ದಿಮನೆಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ವಿಟ್ಲ (ಕು)ಖ್ಯಾತವಾಗಿದ್ದು ಜೀತದಾಳು ಪ್ರಕರಣದಲ್ಲಿ.
ಉಕ್ಕುಡ ಸನಿಹದ ವರಪಾದೆಯಲ್ಲಿನ ಕಪ್ಪು ಕಲ್ಲಿನ ಕೋರೆಯಲ್ಲಿನ 39ಜೀತದಾಳುಗಳನ್ನು ದಶಂಬರ೨ರಂದು ಪತ್ತೆಹಚ್ಚಿದ ಅಸಿಸ್ಟೆಂಟ್ ಕಮಿಶನರ ಪ್ರಭುಲಿಂಗ ಕಾವಳಿಕಟ್ಟಿ ನೇತೄತ್ವದ ತಂಡ ಬಳಿಕ ಕೋರೆ ಲೈಸನ್ಸ್ ಕೂಡ ರದ್ದು ಮಾಡಿದೆ.ಈ ಪ್ರಕರಣದಲ್ಲಿ ಮಾಧ್ಯಮದ ಮಂದಿ ತೋರಿದ ಆಸಕ್ತಿ ಕೋರೆ ಮಾಲಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಂಟರ್ ನ್ಯಾಶನಲ್ ಜಸ್ಟಿಸ್ ಮಿಶನ್ ಎಂಬ ಸರಕಾರೇತರ ಸಂಸ್ಥೆಯ ಪ್ರಯತ್ನದ ಫಲವಾಗಿ ಈ ಪ್ರಕರಣ ಹೊರಬಂದಿದೆ
ಪ್ರಜಾವಾಣಿ ಈ ಜೀತ ಉದ್ಯಮದ ಬಗ್ಗೆ ನಿತ್ಯ "ಜೀತ ಜೀವಂತ " ಅಂಕಣದ ಮೂಲಕ ಬೆಂಕಿ ಕಾರುತ್ತಿದೆ.
ವಿ.ಕ.ಮತ್ತಿತರ ಪತ್ರಿಕೆಗಳಲ್ಲಿ,"ಹಿಂದೂ" ದೈನಿಕದಲ್ಲಿ ಕೂಡ ಮುಖಪುಟದಲ್ಲಿ ಈ ಸುದ್ದಿ ರಾರಾಜಿಸಿದೆ.
ಕಾನೂನಿನ ಮುಷ್ಟಿ ಬಿಗಿಯಾಗಿದೆ.ಸದ್ಯ ಎಲ್ಲ ಕೋರೆ ಮಾಲಕರ ಚಿಂತೆ..ಯಾವ ಇಲಾಖೆಗಳಿಗೆ ಎಲ್ಲಿ- ಎಲ್ಲಿ ಮದ್ದು ಇಡಬೇಕೆಂಬುದು?